ರಚನೆ: ಶ್ರೀ ಪುರಂದರದಾಸರು

ನೀನ್ಯಾಕೊ ನಿನ್ನ ಹಂಗ್ಯಾಕೊ
ನಿನ್ನ ನಾಮದ ಬಲವೊಂದಿದ್ದರೆ ಸಾಕೊ

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿ ಮೂಲ ಎಂಬೊ ನಾಮವೆ ಕಾಯ್ತೊ

ಬಾಲೆಯ ಸಭೆಯಲ್ಲಿ ಸೀರೆಯ ಸೆಳೆವಾಗ
ಕೃಷ್ಣ ಕೃಷ್ಣ ಎಂಬೊ ನಾಮವೆ ಕಾಯ್ತೊ

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬೊ ನಾಮವೆ ಕಾಯ್ತೊ

ನಿನ್ನ ನಾಮಕೆ ಸರಿ ಕಾಣೆನೊ ಜಗದಲಿ
ಘನ್ನ ಮಹಿಮ ಸಿರಿ ಪುರಂದರ ವಿಠ್ಠಲ

ಕೇಳಿರೀ ಈ ಹಾಡನ್ನು
*ಪಂ.ಭೀಮಸೇನ ಜೋಶಿ ಹಾದಿರುವ ನೀನ್ಯಾಕೋ ಯೂಟ್ಯೂಬ್ 

ವರ್ಗ: ಪುರಂದರದಾಸ ಸಾಹಿತ್ಯ